Read Bible

Free to use • No login or registration required • For all ages

Choose your language, version, book, and chapter below. You can optionally pick a single verse for a focused view. Then click Go to see the passage. Need help? See our How to use guide.

Genesis 5

1. ಆದಾಮನ ವಂಶದವರ ದಾಖಲೆಯಿದು: ದೇವರು ಮನುಷ್ಯನನ್ನು ಸೃಷ್ಟಿಸಿದ ದಿನದಲ್ಲಿ ಅವನನ್ನು ತಮ್ಮನ್ನೇ ಹೋಲುವಂತೆ ಉಂಟುಮಾಡಿದರು.

2. ದೇವರು ಅವರನ್ನು ಗಂಡು ಹೆಣ್ಣಾಗಿ ಸೃಷ್ಟಿ ಮಾಡಿದರು. ಅದೇ ದಿನದಲ್ಲಿ ಅವರನ್ನು ಆಶೀರ್ವದಿಸಿ, ಅವರಿಗೆ “ಮನುಷ್ಯ” ಎಂದು ಕರೆದರು.

3. ಆದಾಮನು ನೂರಮೂವತ್ತು ವರುಷದವನಾದಾಗ ರೂಪದಲ್ಲಿ ತನ್ನ ಹೋಲಿಕೆಗೆ ಸರಿಯಾದ ಮಗನನ್ನು ಪಡೆದು ಅವನಿಗೆ, “ಸೇತ್” ಎಂದು ಹೆಸರಿಟ್ಟನು.

4. ಸೇತನು ಹುಟ್ಟಿದ ಮೇಲೆ ಆದಾಮನು ಗಂಡು ಹೆಣ್ಣು ಮಕ್ಕಳನ್ನು ಪಡೆದು, ಎಂಟುನೂರು ವರುಷ ಬದುಕಿದನು.

5. ಆದಾಮನು ಒಟ್ಟು ಒಂಬೈನೂರ ಮೂವತ್ತು ವರುಷ ಬದುಕಿ ಸತ್ತನು.

6. ಸೇತನು ನೂರ ಐದು ವರುಷದವನಾದಾಗ ಎನೋಷನನ್ನು ಪಡೆದನು.

7. ಎನೋಷನು ಹುಟ್ಟಿದ ಮೇಲೆ ಸೇತನು ಎಂಟುನೂರ ಏಳು ವರುಷ ಬದುಕಿದನು. ಅವನಿಗೆ ಬೇರೆ ಗಂಡು ಮತ್ತು ಹೆಣ್ಣುಮಕ್ಕಳು ಇದ್ದರು.

8. ಸೇತನು ಒಟ್ಟು ಒಂಬೈನೂರ ಹನ್ನೆರಡು ವರ್ಷ ಬದುಕಿ ಸತ್ತನು.

9. ಎನೋಷನು ತೊಂಬತ್ತು ವರ್ಷದವನಾದಾಗ ಕೇನಾನನನ್ನು ಪಡೆದನು.

10. ಕೇನಾನನು ಹುಟ್ಟಿದ ಮೇಲೆ ಎನೋಷನು ಗಂಡು ಹೆಣ್ಣು ಮಕ್ಕಳನ್ನು ಪಡೆದು ಎಂಟುನೂರ ಹದಿನೈದು ವರುಷ ಬದುಕಿದನು.

11. ಅವನು ಒಟ್ಟು ಒಂಬೈನೂರ ಐದು ವರುಷ ಬದುಕಿ ಸತ್ತನು.

12. ಕೇನಾನನು ಎಪ್ಪತ್ತು ವರುಷದವನಾದಾಗ, ಅವನಿಂದ ಮಹಲಲೇಲನು ಹುಟ್ಟಿದನು.

13. ಕೇನಾನನು ಮಹಲಲೇಲನು ಹುಟ್ಟಿದ ಮೇಲೆ ಎಂಟುನೂರ ನಲವತ್ತು ವರ್ಷ ಬದುಕಿ, ಗಂಡು ಹೆಣ್ಣು ಮಕ್ಕಳನ್ನು ಪಡೆದನು.

14. ಕೇನಾನನು ಒಟ್ಟು ಒಂಬೈನೂರ ಹತ್ತು ವರ್ಷ ಬದುಕಿ ಸತ್ತನು.

15. ಮಹಲಲೇಲನು ಅರವತ್ತೈದು ವರ್ಷದವನಾಗಿದ್ದಾಗ, ಅವನಿಂದ ಯೆರೆದನು ಹುಟ್ಟಿದನು.

16. ಯೆರೆದನು ಹುಟ್ಟಿದ ಮೇಲೆ ಮಹಲಲೇಲನು ಎಂಟುನೂರ ಮೂವತ್ತು ವರ್ಷ ಬದುಕಿ ಗಂಡು, ಹೆಣ್ಣು ಮಕ್ಕಳನ್ನು ಪಡೆದನು.

17. ಮಹಲಲೇಲನು ಎಂಟುನೂರ ತೊಂಬತ್ತೈದು ವರ್ಷ ಬದುಕಿ ತರುವಾಯ ಸತ್ತನು.

18. ಯೆರೆದನು ನೂರ ಅರವತ್ತೆರಡು ವರುಷದವನಾಗಿದ್ದಾಗ, ಅವನಿಂದ ಹನೋಕನು ಹುಟ್ಟಿದನು.

19. ಹನೋಕನು ಹುಟ್ಟಿದ ಮೇಲೆ, ಯೆರೆದನು ಎಂಟುನೂರು ವರ್ಷ ಬದುಕಿದನು. ಅವನಿಂದ ಗಂಡು, ಹೆಣ್ಣುಮಕ್ಕಳು ಹುಟ್ಟಿದರು.

20. ಯೆರೆದನು ಒಟ್ಟು ಒಂಬೈನೂರ ಅರವತ್ತೆರಡು ವರ್ಷ ಬದುಕಿ, ತರುವಾಯ ಸತ್ತನು.

21. ಹನೋಕನು ಅರವತ್ತೈದು ವರ್ಷದವನಾಗಿದ್ದಾಗ, ಅವನಿಂದ ಮೆತೂಷೆಲಹನು ಹುಟ್ಟಿದನು.

22. ಮೆತೂಷೆಲಹನು ಹುಟ್ಟಿದ ತರುವಾಯ, ಹನೋಕನು ಮುನ್ನೂರು ವರ್ಷ ದೇವರೊಂದಿಗೆ ನಡೆದನು. ಅವನಿಂದ ಗಂಡು, ಹೆಣ್ಣುಮಕ್ಕಳು ಹುಟ್ಟಿದರು.

23. ಹನೋಕನು ಒಟ್ಟು ಮುನ್ನೂರ ಅರವತ್ತೈದು ವರ್ಷ ಬದುಕಿದನು.

24. ದೇವರೊಂದಿಗೆ ನಂಬಿಗಸ್ತನಾಗಿ ನಡೆಯುತ್ತಿದ್ದ ಹನೋಕನನ್ನು ದೇವರು ತೆಗೆದುಕೊಂಡು ಹೋದದ್ದರಿಂದ ಅವನು ಕಾಣಲಿಲ್ಲ.

25. ಮೆತೂಷೆಲಹನು ನೂರ ಎಂಬತ್ತೇಳು ವರ್ಷದವನಾಗಿದ್ದಾಗ, ಅವನಿಂದ ಲೆಮೆಕನು ಹುಟ್ಟಿದನು.

26. ಲೆಮೆಕನು ಹುಟ್ಟಿದ ಮೇಲೆ, ಮೆತೂಷೆಲಹನು ಏಳುನೂರ ಎಂಬತ್ತೆರಡು ವರ್ಷ ಬದುಕಿದನು. ಅವನಿಂದ ಗಂಡು, ಹೆಣ್ಣುಮಕ್ಕಳು ಹುಟ್ಟಿದರು.

27. ಮೆತೂಷೆಲಹನಿಗೆ ಒಟ್ಟು ಒಂಬೈನೂರ ಅರವತ್ತೊಂಭತ್ತು ವರ್ಷಗಳಾಗಿದ್ದವು. ತರುವಾಯ ಅವನು ಸತ್ತನು.

28. ಲೆಮೆಕನು ನೂರ ಎಂಬತ್ತೆರಡು ವರ್ಷದವನಾದಾಗ, ಒಬ್ಬ ಮಗನನ್ನು ಪಡೆದನು.

29. ಅವನಿಗೆ, ನೋಹ ಎಂದು ಹೆಸರಿಟ್ಟು, “ಯೆಹೋವ ದೇವರು ಶಪಿಸಿದ ಭೂಮಿಯಿಂದ ನಮಗೆ ಉಂಟಾದ ಕಷ್ಟದಲ್ಲಿಯೂ ಪ್ರಯಾಸದಲ್ಲಿಯೂ ಇವನೇ ನಮ್ಮನ್ನು ಉಪಶಮನಗೊಳಿಸುವನು,” ಎಂದು ಹೇಳಿದನು.

30. ನೋಹನು ಹುಟ್ಟಿದ ಮೇಲೆ, ಲೆಮೆಕನು ಗಂಡು, ಹೆಣ್ಣು ಮಕ್ಕಳನ್ನು ಪಡೆದು, ಐನೂರ ತೊಂಬತ್ತೈದು ವರ್ಷ ಬದುಕಿದನು.

31. ಲೆಮೆಕನು ಒಟ್ಟು ಏಳುನೂರ ಎಪ್ಪತ್ತೇಳು ವರ್ಷ ಬದುಕಿದನು. ತರುವಾಯ ಅವನು ಸತ್ತನು.

32. ನೋಹನು ಐನೂರು ವರ್ಷದವನಾಗಿದ್ದನು. ಆಗ ನೋಹನಿಂದ ಶೇಮ್, ಹಾಮ್, ಯೆಫೆತರು ಹುಟ್ಟಿದರು.